ಮೊದಲ ಹೆಜ್ಜೆ ಮುಗಿದಿದೆ

Posted by on May 1, 2012 in ಮುಖಪುಟ

ಕನ್ನಡ ಮತ್ತು ತಂತ್ರಜ್ಞಾನದ ಸುತ್ತ ಕೆಲಸ ಮಾಡಲು ಇಚ್ಚೆಯಿರುವ ಮತ್ತು ಕೆಲಸ ಮಾಡುತ್ತಿರುವ ಅನೇಕರನ್ನು ಒಂದೆಡೆ ಸೇರಿಸುವ ಮತ್ತು ಎಲ್ಲರನ್ನೂ ಮತ್ತಷ್ಟು ಕನ್ನಡದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಹುರಿದುಂಬಿಸುವ ಮೊದಲ ಹೆಜ್ಜೆಗೆ ಸಧ್ಯ ಒಂದು ಸಣ್ಣ ವಿರಾಮ…
ಕಾರ್ಯಕ್ರಮದಲ್ಲಿ ಏನೆಲ್ಲಾ ನೆಡೆಯಿತು ಎಂದು ತಿಳಿಯುವ ಕುತೂಹಲ ಕಾರ್ಯಕ್ರಮಕ್ಕೆ ಬರಲಾಗದ ಅನೇಕರಿಗೆ ಇರಬಹುದು. ಈ ಕಾರ್ಯಕ್ರಮ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿಯ ಬೆಂಬಲದಿಂದಾಗಿ ದಿನ ಪೂರ http://justin.tv/cisindia ಮೂಲಕ ಅಂತರ್ಜಾಲದಲ್ಲಿ ಬಿತ್ತರವಾಯಿತು. ಅದರ ರೆಕಾರ್ಡಿಂಗ್ ಇನ್ನೂ ಕೆಲವು ದಿನ ನಿಮಗೆ ಇಲ್ಲಿ ಸಿಗಲಿದೆ. ನಿಮ್ಮೆಲರಿಗೆ ಅದು ಸುಲಭವಾಗಿ ಸಿಗುವಂತಾಗಲು ಆ ವಿಡಿಯೋವನ್ನು ಇಲ್ಲಿ ಎಂಬೆಡ್ ಮಾಡಲಾಗುತ್ತಿದೆ.

Watch live video from cisindia on Justin.tv
ಹೆಜ್ಜೆಯ ಇನ್ನಷ್ಟು ಸ್ವಾರಸ್ಯಕರ ವಿಚಾರಗಳನ್ನು ಇದೇ ವೆಬ್‌ಸೈಟ್ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲಾಗುತ್ತದೆ.